Wednesday 20 June 2007

ಪುನರ್ಜನ್ಮ

ಪುನರ್ಜನ್ಮವೆಂದರೆ ಒಂದು ದೃಷ್ಟಿಯಿಂದ ವಿಕಾಸವೆಂದೇ ಅರ್ಥವಾಗುವುದು. ಈ ನೆಲದಲ್ಲಿ ಮಾನವಜೀವಿ ಅನೇಕಾನೇಕ ಜನ್ಮ ತಳೆಯುತ್ತಾನೆ. ಒಮ್ಮೆ ಗಂಡಸಾಗಿ, ಒಮ್ಮೆ ಹೆಂಗಸಾಗಿ, ಒಮ್ಮೆ ಒಂದು ಸಂಪ್ರದಾಯ ಕುಲದಲ್ಲಿ ಹುಟ್ಟಿ, ಮತ್ತೊಮ್ಮೆ ಮತ್ತೊಂದು ಮತಾನುಯಾಯಿಯಾಗಿ, ದರಿದ್ರನಾಗಿ, ಶ್ರೀಮಂತನಾಗಿ, ದೇವರು ಬೋಧಿಸಿದಂತಹ ಪರಿಪೂರ್ಣತೆಯನ್ನು ಪಡೆಯುವವರೆಗೂ ವಿಕಾಸ ಪಥದಲ್ಲಿ ಮುಂದುವರಿಯುತ್ತಿರುತ್ತಾನೆ. ಒಮ್ಮೆ ಒಂದು ತೆರನಾದ ಕೈಕವಚವನ್ನು ಹಾಕಿಕೊಂಡು, ಅದು ಹರಿದು ಹಾಳಾದಮೇಲೆ ಇನ್ನೊಂದನ್ನು ಹಾಕಿಕೊಳ್ಳುವಂತೆ, ಜೀವಿಯೂ ದೇಹವನ್ನು ಬದಲಾಯಿಸುತ್ತದೆ.
ಮನುಷ್ಯನು ತಾನು ಮಾಡಿದ ಕರ್ಮಕ್ಕೆ ಪ್ರತಿಕ್ರಿಯೆಯಾಗಿ ಆ ಕರ್ಮಫಲವನ್ನು ಅನುಭವಿಸಲೇಬೇಕು. ಆ ಕರ್ಮದ ಫಲವು ಗೋಡೆಗೆ ಬಡಿದು ಹಿಂದಿರುಗುವ ಚೆಂಡಿನಂತೆ ತತ್ಕ್ಷಣವೇ ವ್ಯಕ್ತವಾಗದು. ಯಾವುದೋ ಕರ್ಮದಿಂದಾದ ಪರಿಣಾಮ-ಪ್ರತಿಕ್ರಿಯೆಗಳು ವ್ಯಕ್ತವಾಗಲು ಕೆಲವೊಮ್ಮೆ ಅನೇಕ ಜನ್ಮಗಳೇ ಬೇಕಾಗಬಹುದು. ಕಾರಣವೇನೆಂದರೆ ಸೂಕ್ತವಾದ ಕಾಲ, ಸ್ಥಳ, ಸನ್ನಿವೇಶಗಳು ಬಂದೊದಗದಿದ್ದಲ್ಲಿ, ಮಾಡಿದ ಕರ್ಮದ ಫಲ ವ್ಯಕ್ತವಾಗುವುದಿಲ್ಲ.
ಇತರರಿಗೆ ಎಸೆದ ಕೇಡು ನಮ್ಮಮೇಲೆಯೇ ಹಿಂತಿರುಗಿ ಬರುವ ಕರ್ಮಕ್ಕೆ
೧)Boomerang ಕರ್ಮ
೨) Organismic ಕರ್ಮ,
೩) Symbolic ಕರ್ಮ.

Tuesday 19 June 2007

ಬದುಕಲು ಕಲಿಯಿರಿ

ಪ್ರತಿಯೊಂದು ಕಾರ್ಯಕ್ಕೂ ಕಾರಣವಿರುವಂತೆ, ನಮ್ಮ ಸಧ್ಯದ ಸ್ಥಿತಿಗೆ ನಮ್ಮ ಹಿಂದಿನ ಕರ್ಮಗಳೇ ಕಾರಣವಾದರೆ, ನಮ್ಮ ಇಂದಿನ ಕರ್ಮಗಳೇ ನಾಳಿನ ಸ್ಥಿತಿಯ ರೂವಾರಿಗಳು. ರೇಷ್ಮೆ ಹುಳು ತಾನೇ ತನ್ನ ಸುತ್ತ ಕೋಶವನ್ನು ನಿರ್ಮಿಸಿಕೊಂಡು ಬಂಧಿಯಾದಂತೆ, ನಮ್ಮ ಸಂಸ್ಕಾರಗಳ ಜಾಲವನ್ನು ನಾವೇ ನಮ್ಮ ಸುತ್ತ ಹೆಣೆದು ಅದರಿಂದ ಪಾರಾಗಲು ಸಾಧ್ಯವಾಗದೇ ಹೆಣಗಾಡುತ್ತಿದ್ದೇವೆ. ಕರ್ಮದ ಚಕ್ರ ಚಾಲನೆ ಮಾಡಿದ ನಾವೇ ಅದರಡಿ ಬಿದ್ದು ವಿಲಿವಿಲಿ ಒದ್ದಾಡುತ್ತಿದ್ದೇವೆ. ಆದರೆ ಒಂದು ಮಾತು--
ನಮ್ಮ ಅಧೋಗತಿ ಮಾತ್ರವಲ್ಲ, ಉನ್ನತಿಯೂ ಕರ್ಮದಿಂದಲೇ ಸಾಧ್ಯ. ಹೌದು. ಮಾನವನ ಸ್ವಾತಂತ್ರ್ಯದ ಸಮರ್ಥ ಅಭಿವ್ಯಕ್ತಿಯೇ ಕರ್ಮ. ------ ಸ್ವಾಮಿ ವಿವೇಕಾನಂದ

What so ever a man soweth, that shall be reap.-------Jesus christ

Karma is psychological law and acts primarily in the psychological realm. The physical circumstances being merely means whereby the psychological purpose is fulfilled. What the entity is today is the result of what it has been in days and experiences ages and acons past. For life is continuous, and whether it is manifested in materiality or in other realms of consciousness, it is necessary for its unfoldment.------Edgar Kayce


ಅಕ್ಷರಶಃ ನಿಜ
ಮುಳ್ಳಿನ ಗಿಡದ ಬೀಜವನ್ನು ಬಿತ್ತಿ ಗುಲಾಬಿ ಹೂವನ್ನು ನಿರೀಕ್ಷಿಸುವುದು ಎಂದಾದರೂ ಸಾಧುವೇ? ಆಲದ ಮರದ ಬೀಜದಿಂದ ಆಲದ ಮರವೇ ಮೊಳಕೆಯೊಡೆದೀತೇ ಹೊರತು ಮಾವಿನ ಗಿಡವಲ್ಲ. ಪ್ರಕೃತಿಯ ಈ ನಿಯಮವೇ ನಮ್ಮೀ ಬದುಕಿಗೂ ಅನ್ವಯವಾಗುತ್ತದೆ. ಹಿಂದಿನ ಜನ್ಮಗಳಲ್ಲಿ ಮಾಡಿದ ಕರ್ಮಕ್ಕನುಗುಣವಾಗಿ ನಾವು ಈ ಜನ್ಮದಲ್ಲಿ ಫಲ ಉಣ್ಣಲೇಬೇಕು ಎನ್ನುವುದು ಸನಾತನ ಹಿಂದೂ ಧರ್ಮದ ಕರ್ಮ ನಿಯಮ ಸಾರುವ ಸತ್ಯ.

Monday 18 June 2007

ಬದುಕಲು ಕಲಿಯಿರಿ-ಸ್ವಾಮಿ ಜಗದಾತ್ಮಾನಂದ

ಸ್ವಾಮಿ ಜಗದಾತ್ಮಾನಂದ ಅವರಿಂದ ವಿರಚಿತವಾದ "ಬಿತ್ತಿದಂತೆ ಬೆಳೆ ಸುಳ್ಳಲ್ಲ" ಎಂಬುದರ ಸಾರಾಂಶವನ್ನು ಇಲ್ಲಿ ಕೊಡಲಾಗುತ್ತದೆ.